STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಕೆಂಪು ಕೆಂಪು

ಕೆಂಪು ಕೆಂಪು

1 min
6

ಆದಿ ಅಂತ್ಯವಿಲ್ಲದ

ನಿತ್ಯ ಸತ್ಯನಾದ

ಆದಿತ್ಯ ಮುಳುಗುವನೇ?

ಅಚಲ ಅನಂತ

ಅನಾದಿ ಅರುಣ

ಮುಳುಗುವವನೇ ?

ಚಲನಶೀಲ ಜಗಕೆ

ಸೂರ್ಯೋದಯ

ಸೂರ್ಯಾಸ್ತಗಳ 

ನಿತ್ಯೋತ್ಸವ ಹರ್ಷ

ಹುಟ್ಟು ಕೆಂಪು 

ಮುಳುಗು ಕೆಂಪು

ಆದರೋ ಅಚಲ

ಅವನಿಗಿಲ್ಲ ಎಂದೂ

ಹುಟ್ಟು ಸಾವಿನ

ಈ ಪರಿಭ್ರಮಣ


Rate this content
Log in

Similar kannada poem from Abstract