ಬಿನ್ನಹ
ಬಿನ್ನಹ
ಇಳೆಗೆ ಮಳೆಯಿಲ್ಲ
ಭುವಿಗೆ ಬೆಳೆಯಿಲ್ಲ
ಕೈತುಂಬಾ ಕಾಂಚಾಣ
ಝಣ ಝಣ ಝಣ
ಸುತ್ತಲೂ ಹಬ್ಬಿರುವ
ಕಾಂಕ್ರೀಟ್ ಕಾನನ
ಸಲಿಲಕೇ ನಿತ್ರಾಣ
ಹನಿ ಹನಿ ನೀರಿಗೆ
ಎಲ್ಲೆಡೆ ಹಪಾಹಪಿ
ಟ್ಯಾಂಕರ್ ನೀರಿಗೆ
ಸರದಿಯ ಸಾಲು
ದುಬಾರಿ ಬೆಲೆಯ
ನೀರಿಗೆ ಪರದಾಟ
ಮುಗಿಲು ಮುಟ್ಟಿದ
ದಿನನಿತ್ಯದ ದಿನಸಿ
ಕಾಯಿಪಲ್ಲೆಗಳು
ಇಂದಿಲ್ಲ ಆ ಬಡತನ
ಎಲ್ಲೆಲ್ಲೂ ನರ್ತನ
ಕುರುಡು ಕಾಂಚಾಣ
ತಪ್ಪಲಿಲ್ಲ ಬವಣೆ
ಕಷ್ಟವೋ ಕಷ್ಟ
ಜೀವನ ನಿರ್ವಹಣೆ
ಹೇ ಕೃಷ್ಣಾ ಕೃಪಾಳು
ಇದೋ ನನ್ನ ಬಿನ್ನಹ
ನಿನಗೆನ್ನ ದೇವಾ
ಮನ್ನಿಸಿ ಬಿಡು
ಎಲ್ಲಾ ತಪ್ಪುಗಳಾ
ಕಾದು ಕುಳಿತಿಹ
ಭೂಮಿಯ ತಾಪ
ಪರಿಹರಿಸು ದೇವಾ
ಹರಿಸು ಅಮೃತಧಾರೆ
ತಣಿಸು ಭುವಿಯ ಬೇಗೆ