ಅರುಣ ರಾಗ
ಅರುಣ ರಾಗ
ನಸುಕಿನ ಕಾರ್ಗತ್ತಲು ಕಳೆಯಿತು
ಅರುಣ ಕಿರಣಗಳ ಕೆಂಪು ಮೂಡಿತು
ಕಪ್ಪು ಕತ್ತಲೆ ಕಳೆಯುವ ಸಮಯ
ಆಗಸದಲಿ ಬಣ್ಣಬಣ್ಣದ ಚಿತ್ತಾರ
ತಿಳಿ ನೀಲಿ ಹಳದಿ ಹೊಂಬಣ್ಣ
ಎಳೆಬಿಸಿಲಿನ ರಥವೇರುತ್ತಾ
ಮೂಡಣದಿ ಮೂಡಿದ ರವಿ
ಕೆಂಪು ಬಣ್ಣದೋಕುಳಿ ಹರಡಿ
ಉದಯರವಿಯ ಸಂಭ್ರಮಕೆ
ಭೂ ತಾಯಿ ನಾಚಿ ನೀರಾಗಿ
ಕೆಂಪಾದವು ಅವಳ ಕದಪುಗಳು