STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಜಯಿಸಬೇಕು

ಜಯಿಸಬೇಕು

1 min
316

ಛಲಬೇಕು ಮನುಜನಿಗೆ

ಬಾಳ ಸಮರದೊಳಗೆ

ಬಾಳೊಂದು ಹೋರಾಟ

ಸೋಲುಗೆಲುವಿನಾಟ

ಸೋಲು ಗೆಲುವಿನ ಹಂತ

ಸೋಲನೊಪ್ಪಿ ನಡೆಯುತ

ಗೆಲುವಿನ ಹೆಜ್ಜೆಗಳನಿಡುತ

ಛಲದಲಿ ಮುನ್ನಡೆಯುತ

ಗೆಲ್ಲುವ ಭರವಸೆ ಹೊತ್ತು

ಗೆದ್ದೇ ಗೆಲ್ಲ ಬೇಕು ಕೊನೆಗೆ

ಛಲಬೇಕು ಮನುಜನಿಗೆ

ಗೆಲುವ ಸಾಧಿಸುವ ಕಡೆಗೆ

ಕಲ್ಲಾಗುತ ಕಷ್ಟಗಳಿಗೆ

ಬಿಲ್ಲಾಗುತ ಭಗವಂತನಿಗೆ

ಕಾಯಬೇಕು ಸಹಿಸಬೇಕು

ತಾಳಬೇಕು ಬಾಳಬೇಕು

ಬಾಳ ಹೋರಾಟದಲಿ

ಸೋತು ಗೆಲ್ಲಲು ಬೇಕು

ಗೆದ್ದು ಜಯಿಸಲು ಬೇಕು



Rate this content
Log in

Similar kannada poem from Abstract