STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಭಿನ್ನತೆ

ಭಿನ್ನತೆ

1 min
167

ಈಶಸೃಷ್ಟಿಯಲಿಹವು

ನೂರಾರು ಜೀವಿಗಳು

ನೂರು ವಿಧದ ಮರಗಳು

ಹಲವು ಬಗೆಯ ಹಣ್ಣುಗಳು

ಬಣ್ಣ ಬಣ್ಣದ ಹೂಗಳು

ಸಾವಿರಾರು ನದಿಗಳು

ಹಲವಾರು ಗಿರಿಗಳು

ಹಲವು ಬಗೆಯ ಮಣ್ಣುಗಳು

ಒಂದರಂತೆ ಒಂದಿಲ್ಲ

ಒಬ್ಬರಂತೆ ಮತ್ತೊಬ್ಬರಿಲ್ಲ

ಮೂಲದಲ್ಲಿ ವಿಭಿನ್ನ

ಹೊರಗಡೆ ಭಿನ್ನ ಭಿನ್ನ

ಭೇದವಿರದು ಎಂದಿಗೂ

ಭಿನ್ನತೆಯಲಿ ಏಕತೆ

ಏಕತೆಯಲಿ ಭಿನ್ನತೆ

ಇದೇ ಇಲ್ಲಿ ನಿಯತಿಯು

ಭಿನ್ನತೆಯ ಬಿಡಿಗಳನು

ಏಕತೆಯ ಸೂತ್ರದಲಿ

ಪೋಣಿಸಿ ಪೂರ್ಣಮಾಡಿ

ಪೂರ್ಣದಿಂದೊಡೆದು ಬಂದ

ಭಿನ್ನಗಳನು ಮತ್ತೆ

ಪೂರ್ಣತೆಗೊಯ್ಯುವುದೇ

ಸೃಷ್ಟೀಶನ ಅಣತಿಯು



Rate this content
Log in

Similar kannada poem from Abstract