ಹೊಸ ವರುಷ
ಹೊಸ ವರುಷ
ಹಗಲು ಇರುಳು
ಬೈಗು ಬೆಳಗು
ಪಕ್ಷ ಮಾಸ
ತಿರುಗಿ ತಿರುಗಿ
ಕಾಲ ಚಕ್ರ
ಉರುಳುರುಳಿ
ಮತ್ತೆ ಬಂತು
ಹೊಸತು ವರುಷ
ಇರುಳು ಸರಿಸಿ
ಬೆಳಕು ಹರಿಸಿ
ನೋವ ಮರೆಸಿ
ನಗೆಯನರಳಿಸಿ
ಭರವಸೆಗಳ
ಹೊತ್ತುಕೊಂಡು
ಮತ್ತೆ ಬಂತು
ಹೊಸತು ವರುಷ
ರೋಗ ಕಳೆದು
ನಿರೋಗವರಳಿ
ಜಗದ ಜನಕೆ
ಸುಖ ಶಾಂತಿ
ನೆಮ್ಮದಿಗಳಾ
ಹೊತ್ತು ಬರಲಿ
ತರಲಿ ಹರುಷ
ಹೊಸತು ವರುಷ