ನಗರದ ಹಸಿರು
ನಗರದ ಹಸಿರು
1 min
336
ಮಹಾನಗರ ಬೆಳೆಯುತಿಹುದು
ಹಸಿರು ಕಣ್ಮರೆಯಾಗುತಿಹುದು
ಏಳುತಿವೆ ಗಗನಚುಂಬಿ ಕಟ್ಟಡಗಳು
ಧರೆಗುರುಳುತಿವೆ ಹಸಿರು ಮರಗಳು
ಹಸಿರಿರದೆ ಉಸಿರು ನಿಲ್ಲುತಿಹುದು
ಉಸಿರಿಗಾಗಿ ಸರದಿ ಬೆಳೆಯುತಿಹುದು
ತಾರಸಿ ತೋಟಗಳು ತಲೆಯೆತ್ತಿವೆ
ಕುಂಡಗಳಲಿ ಹಸಿರು ಅರಳುತ್ತಿವೆ
ಹಸಿರೇ ಉಸಿರು ಉಸಿರೇ ಬದುಕು
ಬದುಕಲು ಬೇಕೇ ಬೇಕು ಹಚ್ಚಹಸಿರು
ಸಾಕು ನಿಲ್ಲಿಸಲಿ ಕಾಂಕ್ರೀಟ್ ಭವನ
ಉಳಿಸಿ ಬೆಳೆಸಲಿ ಹಸಿರು ಕಾನನ