ಸ್ವಾಭಿಮಾನ
ಸ್ವಾಭಿಮಾನ
ಕೆಲವೊಮ್ಮೆ ಸ್ವಾಭಿಮಾನ
ಬಹಳ ಮುಖ್ಯ ಅನಿಸುತ್ತದೆ
ಕೆಲವರು ನಮ್ಮನ್ನು ನಿರ್ಲಕ್ಷಿಸಿದಾಗ
ಪ್ರೇಮದ ಕಟ್ಟೆ ಒಡೆಯುತ್ತದೆ
ನೋವಿನ ಮಾತುಗಳು ಕಿವಿಗೆ ಬಿದ್ದಾಗ
ಕೆಲಸವಿಲ್ಲದೆ ಖಾಲಿ ಕುಳಿತ ಮಾತ್ರಕ್ಕೆ
ಕೇವಲವಾಗಿ ಕಾಣುವೆವು ಕೆಲವರ ಕಣ್ಣಿಗೆ
ಮನಸ್ಸು ಮುರಿದು ಬೀಳುತ್ತದೆ
ಊರೂರು ಸುತ್ತಿ ಸಾಕಬೇಕಲ್ಲ ನಿನ್ನ
ಎಂಬಂತಹ ಉರಿ ಉರಿ ಮಾತುಗಳ ಕೇಳಿ
ಕಟ್ಟಿದ ಕನಸುಗಳು ಕರಗಿ ಹೋಗುತ್ತವೆ
ಹೌದು ಎಲ್ಲಕ್ಕಿಂತ ಹೆಣ್ಣಿಗೆ ಸ್ವಾಭಿಮಾನವೇ ಹೆಚ್ಚು...!
