STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಸುರಸುಂದರ

ಸುರಸುಂದರ

1 min
12

ನೀ ಬಂದು ಬೆಳಗಿದೆ ಜಗವನ್ನು 

ನಿನ್ನಿಂದಲೇ ನನ್ನ ನೋವೆಲ್ಲಾ ಮರೆತೆ

ನಿನ್ನ ನಗುವೇ ನನ್ನ ದಿನಗಳ ಬೆಳಗಿದವು

ನನ್ನ ಕಷ್ಟಗಳನ್ನೆಲ್ಲಾ ಪರಿಹರಿಸಿದ ಮನ್ಮಥ!!


ನೀನಲ್ಲವೇ ನನ್ನೆಲ್ಲಾ ಕನಸುಗಳು

ನಿನ್ನಿಂದಲೇ ತಾನೆ ಅವೆಲ್ಲಾ ನನಸಾಗಿದ್ದು 

ಅದೇನು ಮಾಟ ಮಂತ್ರ ಮಾಡಿರುವೆಯೋ 

ಅದರಿಂದಲ್ಲೇ ಅಲ್ಲವೇ ನಾನು ಪೂರ್ಣಳಾದ್ದು!!


ನನ್ನ ಹೃದಯ ಮಿಡಿಯುತ್ತಿದೆ ನಿನಗಾಗಿ ಅನುದಿನ 

ನೀ ಮನದೊಳಗೆ ಮಿಡಿಯುತಿರುವ ಪ್ರೇಮ ಬರಹ 

ನಿನ್ನ ಮನದಾಳದ ಕರುಣೆಗೆ ನಾನು ಏನೆನ್ನಲಿ ಗೆಳೆಯ 

ನಿನ್ನ ಒಲವು ಎಂದೆಂದಿಗೂ ಹೀಗೇ ಇರಲಿ ಸುರಸುಂದರ!!


Rate this content
Log in

Similar kannada poem from Romance