STORYMIRROR

Arjun Maurya

Tragedy Action Classics

4  

Arjun Maurya

Tragedy Action Classics

ಸೋರಿಕೆ

ಸೋರಿಕೆ

1 min
376

ಭಕ್ತಿ ಸಂಕೇತದಾ ಕಳಸ ಬೀಳುವುದಿರಲಿ

ಅಲ್ಲಾಡಿಸುವುದೂ ಕಷ್ಟ | ಸ್ಥಂಭಗಳಿವೆ.

ಭಕ್ತಸಾಗರದಲೆಗಳ

ತನು-ಮನ-ಧನಗಳಿವೆ |

ಚಂಡೆವಾದ್ಯನಗಾರಿಗಳ

ಶಂಖಜಾಗಟೆಗಳ

ನಾಲ್ಕು ದಿಶೆಗಳ ತುಂಬಾ ಹರಡಿದ ಶಬ್ದಗಳಿವೆ |

ಆಕಾಶದೆತ್ತರಕ್ಕೇರಿದ

ಗೋಪುರವಿದೆ |

ಕಂಗೊಳಿಸುವ

ಬಂಗಾರದ ಕಳಸವಿದೆ |

ಸಂಕೇತವಿದೆ |

ಗುಡುಗುಮಿಂಚಿಗೆ

ಗಾಳಿ-ಮಳೆಗೆ

ಬೆದರದ ಸೋರದ

ಮೇಲ್ಟಾವಣಿಯಿದೆ |


ಆ ಸರಕಾರಿ

ಪ್ರಾಥಮಿಕ ಶಾಲೆಯ ಮಾಸಿದ ಬಣ್ಣದ

ಗೋಡೆಯ ಒಳಗೆ

ಹಾಗೋ ಈಗೋ

ಅನ್ನುವ

ವಕ್ರ ಮೇಲ್ಬಾವಣಿ

ಕೆಳಗೆ

ಬಂಗಾರದ ಕನಸೊಂದ

ಕಾಣುತ್ತಿದ್ದ ಮಾದನ

ಮೈಯು ಭಾಗಶಃ

ತೋಯ್ದಿತ್ತು..

ಗುಡುಗು ಮಿಂಚಿಗೆ

ಗಾಳಿಮಳೆಗೆ

ತೋಯದಂತೆ ಮಾಡುವ

ಗಟ್ಟಿಸ್ಥಂಭಗಳು

ಆಗೋ ಈಗೋ ಅನ್ನುವಂತಿದ್ದವು |

ಮೇಷ್ಟು ಪಾಠ ನಿಲ್ಲಿಸಿರಲಿಲ್ಲ.

ಆಶಾವಾದಿಯಾಗಿದ್ದರು!!


Rate this content
Log in

Similar kannada poem from Tragedy