Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಸಂಕ್ರಮಣ

ಸಂಕ್ರಮಣ

1 min
5

ದಕ್ಷಿಣದಿಂದುತ್ತರಕೆ

ಕಟಕದಿಂ ಮಕರನೆಡೆಗೆ

ಸೂರ್ಯಪಥ ಸಂಚಲನ

ಅದುವೆ ಮಕರ಺ಸಂಕ್ರಮಣ

ಉದಿಸುವುದುತ್ತರಾಯಣ

ಮರೆಯಾಗುವುದು ದಕ್ಷಿಣಾಯನ

ತೆರೆಯುವುದಾಗ ದೇವಯಾನ

ಪಾವನತಮ ಸಂಕ್ರಮಣ

ಸುಗ್ಗಿಯಾ ಸಡಗರವು

ಎಲ್ಲೆಡೆಯೂ ಹಬ್ಬುವುದು

ಕಬ್ಬು ಬತ್ತಗಳಾ ತೆನೆಗಳು

ಹರುಷದಿಂ ತಲೆದೂಗುವುವು

ಧಾನ್ಯಗಳಾ ರಾಶಿಗಳು

ಮುುಗಿಲ ಮುಟ್ಟುವುವು

ಮನೆಮನೆಗಳಾ ಕಣಜಗಳು

ತುಂಬಿ ತುಳುಕುವುವು

ಎಳ್ಳು ಬೆಲ್ಲಗಳ ನೀಡುತ

ಒಳ್ಳೆ ಮಾತುಗಳನಾಡುವ

ಸಂಭ್ರಮದ ಸಂಕ್ರಾಂತಿ

ನೀಡಲೆಲ್ಲರಿಗೂ ಸುಖಶಾಂತಿ

Rate this content
Log in

Similar kannada poem from Abstract