STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಸಿಹಿ ಮುತ್ತು

ಸಿಹಿ ಮುತ್ತು

1 min
20

ಎಂದು ನೋಡಿದೆನೋ ನಿನ್ನ ಕಂಗಳ

ಮರುಳಾದೆ ನಾ ಆ ಕಂಗಳ ಅಂದಕೆ

ಘಾಸಿಯಾಯಿತು ನನ್ನ ಹೃದಯಕೆ 

ಬಾಣದಂತ ನಿನ್ನ ಹರಿತವಾದ ನೋಟಕದಿಂದ!!


ಪ್ರೀತಿ ಚಿಗುರಿತು ನೀ ಬೀರಲು ಹೂನಗೆ

ಆಹಾ....ಮುತ್ತಿನಂತೆ ಆ ನಿನ್ನ ಕಿರುನಗೆ

ಮಿಂಚಂತೆ ಮಿನುಗಿತು ನನ್ನ ಹೃದಯಕೆ

ಸರಿಗಮವು ಒಟ್ಟಾಗಿ ಚೆಲ್ಲಿತು ಮನಕೆ!!


ಗುಲಾಬಿ ದಳದಂತೆ ಅಂದ ನಿನ್ನ ಕೆನ್ನೆ

ದಾಳಿಂಬೆ ಹಣ್ಣಿನ ರಸದಂತೆ ನಿನ್ನ ತುಟಿ

ಜೇನಿನ ರಸವ ಸವರಿದೆ ಮೆತ್ತಗೆ 

ತುಟಿಗಳಿಗೆ ಸಿಹಿ ಮುತ್ತಿನ ಸ್ವರ್ಗದಂತೆ!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance