STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಸೌರಶಕ್ತಿ

ಸೌರಶಕ್ತಿ

1 min
416

ಸೌರಶಕ್ತಿ ಉಡುಗಿ

ಜಗದ ಮಗ್ಗುಲು 

ನಿಡುಸುಯಿದಾಗ,

ಪೌರರೆಲ್ಲ ರೆಪ್ಪೆಯಡಿ

ಕನಸಿಗೆ ಜಾರಿರುವಾಗ,

ನೀನಿಲ್ಲಿ ನೆನಪಾಗಿ ಕಾಡಿದ್ದು ಸರಿಯೇ?


ಅಘೋಚರದಾಮಿಷಕೆ

ಮನೋಹರ ಕೋರಿಕೆ. 

ಅರುಣೋದಯದ ಮುನ್ನ ಅನಾವರಣಕೆ..

ಕಾಣಿಕೆಗೆ ಕಾರಣವೇಕೆ?


ನೀರ ಬಿಂದಿಗೆ ನೆಪವಷ್ಟೆ, 

ತೀರ ಹುಡುಕುವುದಷ್ಟೆ ಬೇಕಿತ್ತು, 

ಭಾರವೆನಿಸದ ಭಾವಗಳೆ ಹಗುರವಷ್ಟೆ.

ನಾವದರ ಪ್ರಾಂಗಣವ ಆವರಿಸುವಷ್ಟು.


ಕತ್ತಲಿನ ಸಾಂದ್ರತೆಗೆ ಹೆದರಿದ್ದೆ ನಾ, 

ರಸಿಕ ಮಾಂತ್ರಿಕ ನೀನೆ 

ಎಂದರಿಯದೆ ಹೋದೆ,

ಮನದಿ ರಂದ್ರ ಹೂಡಿದವ, ಅದು ಹೇಗೋ ಚಂದ್ರನಾದೆ.


ಸ್ವಪ್ನಗಳ ಲೋಕದಿ 

ನಮ್ಮದೇ ಜಾತ್ರೆಯಿಲ್ಲಿ.

ಭಗ್ನ ಕನಸ ನನಸಾಗಿಸಿ

ಪ್ರೇಮಮಗ್ನಕೆ ತಜ್ಞ ನೀನಾದರೆ, 

ಆಜ್ಞೆ ಮಾತ್ರ ನನ್ನದೇ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance