Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Ramamurthy Somanahalli

Romance Classics Others

3  

Ramamurthy Somanahalli

Romance Classics Others

ರಾಧೆಯಿಲ್ಲದ ಶ್ಯಾಮ..

ರಾಧೆಯಿಲ್ಲದ ಶ್ಯಾಮ..

1 min
157


ರಾಧೆಯಿಲ್ಲದ ಶ್ಯಾಮನ ಜಗದೊಳಗೆ ಹುಡುಕುವೆಯೇಕೆ

ರಾಧೆಗಾಗಿಯೇ ಜನಿಸಿಹೆನೆಂಬ ಸತ್ಯವನು ಮರೆತೆಯೇಕೆ  || ಎರಡು ಬಾರಿ||

ಪರಿಶುದ್ಧ ನಮ್ಮೀ ಪ್ರೇಮ ಬಲುಮಧುರ

ರಾಧಾಕೃಷ್ಣನ ಪ್ರೇಮಗಾಥೆ ಸದಾ ಅಮರ ||೧||


ಚಿಂತೆಯಾ ಚಿತೆಯಲಿ ನೀನೇಕೆ ಬಳಲುವೆ

ಬಿಡು ವಿರಹದಾ ನೋವ ನಿನ್ನೊಳಗೇ ಲೀನನಾಗಿರುವೆ

ರಾಧೆಯಿಲ್ಲದ ಮಾಧವನ ಇನ್ನೆಲ್ಲಿ ಕಾಣುವೆ

 ನಿನ್ನೊಲವಿನಾ ಪಂಜರದಿ ನಾ ಬಂಧಿಯಾಗಿರುವೆ ||೨||


ನಿನ್ನ ಬಳಿ ನಾನಿಲ್ಲವೆಂದು ಮುನಿಸು ತೋರುವುದೇಕೆ

ನಿನ್ನೀ ಹೃದಯ ಚಿತ್ತ ಚೋರನ ದೂರುವುದೇಕೆ

ವಿರಹಾಗ್ನಿಯಲಿ ಬೆಂದು ಕಣ್ಣೀರು ಸುರಿಸುವುದೇಕೆ

ನಿನ್ನೊಳಗಿಹ ಕೃಷ್ಣನ ಕಾಣದೆ ಮರುಗುವುದೇಕೆ ||೩||


ಮುರಳಿಯು ನಾನು, ಮುರಳಿಯ ಗಾನವೇ ನೀನು

ನಿನ್ನುಸಿರ ಉಸಿರಾಗಿಹ ರಾಧಾಶ್ಯಾಮನು ನಾನು

ನಿನ್ನೊಳಗೇ ನಾನಿರುವಾಗ ವಿರಹ ಕಾಡುವುದೇನು

ಬಿಡು ಭ್ರಮೆಯ

ರಾಧೆ ಬಳಿಯಿರುವೆ ನಾನು ||೪||


Rate this content
Log in