STORYMIRROR

Pushpa Prasad

Abstract Romance Inspirational

4  

Pushpa Prasad

Abstract Romance Inspirational

ಪ್ರೀತಿಯ ಚಿಲುಮೆ

ಪ್ರೀತಿಯ ಚಿಲುಮೆ

1 min
11

ಚಿಮ್ಮಿತು ಪ್ರೀತಿಯ ಚಿಲುಮೆ ಕಂಡಾಗ ನಿನ್ನ

ಅಂದು ತುಟಿಯಲ್ಲಿ ನಿನ್ನ ನಗು ನೋಡಿದಾಗ 

ಎಷ್ಟೊಂದು ಮಧುರ ಕಳೆದೊಂದು ದಿನವದು

ಕಂಗಳ ನೋಟ ಬೆರೆತಂತ ಕ್ಷಣವದು!!


ಪ್ರೀತಿಯ ಗುಲಾಬಿ ಇಟ್ಟಾಗ ನಿನ್ನ ಕೈಲಿ 

ನಾಚಿ ನೀರಾದೆ ಕೆಂಪುಗೆನ್ನೆಯ ಸೊಬಗಲಿ 

ನನ್ನ ಕೈಯಲ್ಲಿ ನೀ ಕೈ ಜೋಡಿಸಿದಾಗ

ಜೋಡಿ ಹಕ್ಕಿಗಳಂತೆ ಮನ ಹಾರಿತಾಗ!!


ಜೊತೆಯಲಿ ಹೀರಿದಾಗ ಹಣ್ಣಿನ ರಸ

ಕರಗಳಲಿ ರೋಮ ಜುಮ್ಮೆಂದ ಕ್ಷಣ

ಮರೆಯಲಾರೆ ಎಂದಿಗೂ ಮೊದಲ ಭೇಟಿಯ

ಕಳೆಯೋಣ ಪ್ರತಿಕ್ಷಣ ಸವಿಯುತ್ತಾ ಬಾಳರಸ!! 


Rate this content
Log in

Similar kannada poem from Abstract