ಪ್ರೀತಿ ಮಾತು
ಪ್ರೀತಿ ಮಾತು
ಅಕ್ಕರೆ ಇಲ್ಲದ ಸಕ್ಕರೆ ಮಾತ
ಎಸಿದ್ರೇನ? ನನ್ನ ರತನಿ..
ಕುಕ್ಕರಗಾಲಿಲೆ ಕೊಕ್ಕರಿಯಂಗ
ಕಾದ್ರೂ ಬರಲಿಲ್ಲ ಕರುಣಿ..
ನಾನಂತು ಹಸಿ ಮೆನಸಿನ ಕಾಯಿ
ಬಾಳ ಅದಿನಲ್ಲ ಖಾರ..
ಕುಟ್ಟಿ ಚೆಟ್ನಿ ಮಾಡಿದ್ರೂನು
ನಿಂಗ ಆಗವಲ್ತೇನು ಕಬರ..
ನಿಮ್ಮಪ್ಪ ಆಡಿದ ಮಾತಿಗಾಗೆ
ಕೊಪ್ಪರಿಗೆ ಹೊನ್ನು ತಂದ್ಯಾ..
ಉಪ್ಪರಿಗೆ ಮ್ಯಾಲ ನಿನ್ನ ಇಟ್ಟು
ಆಗಾಗ ಕಡಕೊಂಡು ತಿಂದ್ಯಾ..
ನೀನು ಶುಂಠಿ,ನಾನಂತೂ ಬೆಲ್ಲ
ಕೂಡಿದಾಗ ಪಾನಕ ಆತಿ..
ಜೋಡ ಕುಂತು ಹಾಡಿ ಆಡಿ
ಬಾಳೊದೊಂದೆ ಉಳಿತಿ..

