ಒಲವು ಅರಳಲು
ಒಲವು ಅರಳಲು
ಕಣ್ಣ ಕುಡಿಯಂಚಿನಲಿ
ಕಿರುನಗುವೊಂದು ಮೂಡಿದೆ
ನನ್ನ ಬಾಳ ಬೆಳದಿಂಗಳ
ಬಾನಿನಂಗಳದಿ ಚುಕ್ಕಿ ನೀನಾಗಿರುವೆ
ಪುಟ್ಟ ಕಂಗಳಲೇನೋ
ಅದು ಪ್ರೀತಿಯ ಧಾರೆ
ಅಸ್ಪಷ್ಟ ಕಲ್ಪನೆಗೆ ನಿಜ ರೂಪ
ನೀ ತಂದೆ..
ನಿನ್ನ ಯೋಚನೆಯಲ್ಲೇ
ಆರಂಭ ನನ್ನ ದಿನ
ಬಾಳಿನ ಕಥೆಗೆ ನೀನೇ ಮುನ್ನುಡಿ
ಅನುರಾಗ ಮಂದಿರದಿ
ನಿನ್ನದೇ ಪ್ರತಿಬಿಂಬವಿದೆ..
ಎಲ್ಲಾ ಯೋಚನೆಯಲೂ
ನೀನೇ ಸುಳಿದಾಡುತಿರುವೆ
ಸೂಚನೆಯೇ ನೀಡದೆ
ಮನವ ಕದ್ದೊಯ್ದಿರುವೆ
ರಸ ಸಾಗರದಲಿ ಒಲವ
ಕಮಲ ಅರಳಿ ನಿಂತಿದೆ
ಮುದ್ದು ಮನಸಿನ ಮುಗ್ಧ
ಪ್ರೇಮಕೆ ನಾ ವಶವಾಗಿಹೆ..

