STORYMIRROR

Surabhi Latha

Romance Classics Others

4  

Surabhi Latha

Romance Classics Others

ಒಲವೇ

ಒಲವೇ

1 min
239

ಒಡಲ ತುಂಬಾ ಪ್ರೀತಿಯ ಮಲ್ಲಿಗೆ 

ಮುಡಿಸಲೆಂದು ಬಂದೆ ಅಲ್ಲಿಗೆ 

ನಿನ್ನ ಕಣ್ಣಕಾಂತಿಗೆ ಸೋಲುತ ನಿಂತೆ 

ನುಡಿಯುವ ಮಾತು ಮರೆತು ಹೋದೆ 


ಮುಳುಗುವ ಸೂರ್ಯನ ಕಡು ಕೆಂಪು 

ನಿನ್ನ ಕೆನ್ನೆಯ ಹೋಲುತ್ತಿತ್ತು 

ತುಟಿಯಂಚಿನ ಆ ತಿಳಿ ನಗುವಿಗೆ 

ಮನವಿಂದು ಸೋಲುತ್ತಿತ್ತು 


ಉಬ್ಬಿದ ಎದೆ ಸಣ್ಣ ನಡುವು 

ಏನೆಂದು ಬಣ್ಣಿಸಲಿ ಚೆಲುವು 

ಕಾತರದಿ ಕಾದೆ ನೋಡುವೆ ಎಂದು ನನ್ನ 

ನೋಡಿ ನೋಡದವಳಾದೆ ಏಕೆ ಚಿನ್ನ 


ಬಳಿ ಬಂದು ಒಪ್ಪಿಸಬಾರದೆ ನನ್ನೊಲವು 

ಬಕ ಪಕ್ಷಿಯಂತೆ ಕಾಡಿದೆ ನನ್ನ ಮನವು 

ಮುದ್ದಾದ ನಿನ್ನ ಹೆಸರೇ ಪ್ರಿಯ 

ಪ್ರೇಮದಿ ಕರೆಯಲೇಕೋ ಭಯ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance