ಒಲವೇ... ಓ ನನ್ನೊಲವೇ.....
ಒಲವೇ... ಓ ನನ್ನೊಲವೇ.....
ಒಲವೇ ಓ ನನ್ನೊಲವೇ.....
ಮನವನು ಕೆಡಿಸಿ ಪ್ರೀತಿಯ ಕಲಿಸಿ
ಈ ಬಾಳಿನಾ ಬಯಕೆಯ ಹೆಚ್ಚಿಸಿದೆ
ಒಲವಿನ ಸುಧೆಯ ನೀ ಹರಿಸಿ
ಬಾಳೆಲ್ಲ ಬಂಗಾರ ಮಾಡಿದೆ!!
ಒಲವೇ ಓ ನನ್ನೊಲವೇ.......
ಬಿರುಗಾಳಿಗೆ ಸಿಲುಕಿ ದಾರ ಕಡಿದ ಗಾಳಿಪಟಕೆ
ಆಸರೆ ನೀಡಿ ಚೈತನ್ಯವ ತುಂಬಿದೆ
ಎಲ್ಲಾ ಶೂನ್ಯವೆಂದು ಹೊರಟ ಈ ದೇಹಕೆ
ಆಸೆ ತುಂಬಿ ಬದುಕಲು ನೀ ಕಲಿಸಿದೆ!!
ಒಲವೇ ಓ ನನ್ನೊಲವೇ.....
ಎಷ್ಟೊಂದು ಸುಂದರ ನಿನ್ನಯ ಒಡನಾಟ
ಕನಸಲಿ ಕಾಡೋ ಆ ನಿನ್ನ ನೋಟ
ಕಾದಿದೆ ಈ ಮನ ಬೆರೆತು ಸಾಗಲು ಕಾಲಚಕ್ರದಿ
ಜೊತೆಗೂಡಿ ಬಾಳೆಂಬ ರಥದಿ!!
ಒಲವೇ ಓ ನನ್ನೊಲವೇ.....

