STORYMIRROR

Pushpa Prasad

Romance Classics Others

4  

Pushpa Prasad

Romance Classics Others

ನನಸಾಗಬಾರದೇ ಕನಸು

ನನಸಾಗಬಾರದೇ ಕನಸು

1 min
269

ನೋಡಿದಷ್ಟು ಘಮಘಮಿಸುವುದು

ಪ್ರೀತಿಯೆನ್ನುವ ಚಂದನ

ಕಾಡಿದಷ್ಟು ಬಿಗಿಯಾಗುವುದು

ಎರಡು ಹೃದಯಗಳ ಬಂಧನ!!

ವಸಂತ ಕಾಲದಿ ಕೋಗಿಲೆ ಕೂಗಲು

ನೆನಪಾಗಿದೆ ನಿನ್ನ ದನಿಯು

ಹೃದಯಯಕೆ ಸುರಿಸಿದೆ

ತಂಪಾದ ಒಲವಿನ ಮಳೆ ಹನಿಯು!!

ಬಯಸಿವೆ ನನ್ನ ಅಧರಗಳು

ನಿನ್ನಿಂದ ಸಿಹಿಯಾದ ಜೇನ ಹನಿಯ

ಸೆಳೆದಿವೆ ಕಣ್ಣುಗಳು

ಮೋಹಿಸಿ ನಿನ್ನಯ ನೋಟವ!!

ನಿನ್ನ ನೋಡುತಲೇ ಕವಿತೆಯ

ಬರೆಯದೆ ಕವಿಯಾದೆ ನಾ

ನಿನ್ನಯ ಸ್ಪರ್ಶಿಸಲು ಹೂ

ಕಿರಣವ ಸೂಸುವ ರವಿಯಾದೆ ನಾ!!

ಯಾಕೆ ನೀನು ಕನಸಲಿ ತುಸು

ಗೋಚರಿಸಿ ಕ್ಷಣದಲಿ ಮರೆಯಾದೆ

ಕನಸನ್ನು ನನಸು ಮಾಡಲು

ಎದುರೊಮ್ಮೆ ಬರಬಾರದೇ!!


Rate this content
Log in

Similar kannada poem from Romance