ನನ್ನ ಊರು
ನನ್ನ ಊರು
ಹಸಿರ ಹೊದಿಕೆ ಮಡಿಲಲ್ಲಿ ಆಸರೆ
ನಿನ್ನ ನೋಡಿ ಮೆಚ್ಚಿದೆ ಮನಸಾರೆ
ನೀನೆ ನನ್ನ ಮನದ ನೆಚ್ಚಿನ ರಸಧಾರೆ
ಓಂ ಚೆಲುವಿನ ತಂಪಿನ ನನ್ನೂರೇ
ಹರಿವಳು ಹರುಷದಿ ಮೈತುಂಬಿ ಚಿತ್ತಾರಿ ಹೊಳೆ
ಅವಳ ಸಿರಿಗೆ ಈ ನಾಡಿಗೆ ಬಂದಿದೆ ಚಂದದ ಕಳೆ
ಇಲ್ಲಿದೆ ದೇವಾಲಯಗಳ ಅಂದದ ಬೆಳೆ
ಬರಲೇಬೇಕು ನೀವೆಲ್ಲರೂ ನಾಳೆ
ಕಾನನವು ಕೈಬೀಸಿ ಕರೆಯಲು
ಹಸಿರ ಬಯಲು ಮೈಮರೆತು ವಿಹರಿಸಲು
ಹಗಲಲ್ಲು ಇರುಳಲ್ಲು ವಜ್ರದಂತೆ ಹೊಳೆಯಲು
ಈ ಊರ ಅಂದಕೆ ಕಣ್ಣುಗಳೆರಡು ಅರಳಲು
