ಅಸ್ತಿತ್ವ
ಅಸ್ತಿತ್ವ
ನಂಬಿಕೆಗಳ ಪರ್ವತವೇರು
ಮಾರ್ಗಗಗಳ ಹುಡುಕು I
ಹಿಡಿ ಭರವಸೆಗಳ ತೇರು
ಕಾಣು ಪ್ರಯತ್ನದಿ ಬೆಳಕು II
ಕಲ್ಲುಮುಳ್ಳುಏನೇ ಬರಲಿ
ನಡೆವದಾರಿಗಡೆತಡೆ I
ಕಷ್ಟಗಳನೇ ಮೆಟ್ಟಿ ನಿಂತು
ಗುರಿಯೆಡೆಗೆ ಮುನ್ನಡೆ II
ಕಲಾಶಿಲ್ಪಿ ಉಳಿಯಪೆಟ್ಟು
ಸಾವಿರಾರು ಚುಚ್ಚಲಿ I
ನೋವ ತನುವು ಗಟ್ಟಿಯಾಗಿ
ದೇವರಾಗೇ ಮೂಡಲಿ II
ತಾಳದಿರು ಹತಾಶಭಾವ
ಕಲ್ಲು ಕೂಡ ಅರಳಬೇಕು I
ಕನಸೆ ಬೇರೆ ನನಸೇ ಬೇರೆ
ಕಷ್ಟಸುಖಕೂ ಹೊಂದಬೇಕು II
ಗುಮ್ಮನಂತೆ ಕೂರಬೇಡ
ನಿನ್ನ ಹಾದಿ ಮರೆಯಬೇಡ I
ಜಗದ ದಾರಿಯೊಳಗೆ ನಿಂತು
ಬದುಕ ರೀತಿಗೆದರಬೇಡ II
ನಿನ್ನೊಳಗಿನ ಶಕ್ತಿಯರಿವು
ನೀನು ಮೊದಲು ಅರಿಯಬೇಕು I
ನೀನೆ ನಿಜದ ರಾಜನಾಗಿ
ವಿಶ್ವಮನುಜನಾಗಬೇಕು II
