ಅವಲಂಬನ
ಅವಲಂಬನ
ಗೂಡಿನ ಮರಿಯು
ಗುಟುಕುಗಾಗಿ ಕಾದಿದೆ
ಒಂಟಿ ರೆಕ್ಕೆಯ ಅಮ್ಮ
ಬರವವರೆಗೂ..
ಚೆಲುವೆಯವಳು ಪ್ರೀತಿ
ಮಾತಿಗಾಗೇ ಕಾದಳು
ಮೂಕನಾದ ಅವನು
ಎನ್ನ ಹೊಗಳಲೆಂದು
ಕಳಿಂಗನ ಗೆದ್ದ
ಅಶೋಕ ಸೋತಿದ್ದ
ಕರುಣಾ ಸಾಗರಕೆ
ಮಿಕ್ಕೆಲ್ಲವಾ ಮೀರಿದ್ದ
ಎಲ್ಲವನ್ನೂ ಖರೀದಿ
ಮಾಡಬಲ್ಲ ಶ್ರೀಮಂತ
ಅವಳ ಹೃದಯಕ್ಕಾಗಿ
ಭಿಕ್ಷುಕನಂತಾಗಿದ್ದ
ರಜನಿಯು ರಾತ್ರಿ
ರಂಜಿಸಲು ಬರಲು
ಸೂರ್ಯನ ಜೊತೆ
ರಾಜಿಯೂ ಬೇಕಿತ್ತು
