STORYMIRROR

Arjun Maurya

Romance Action Thriller

4  

Arjun Maurya

Romance Action Thriller

ಭೂಮ್ಯಾಕಾಶ...

ಭೂಮ್ಯಾಕಾಶ...

1 min
364

ಆ ನಿನ್ನಧರದ ಸ್ಪರ್ಶದ ಶಾಖಕೆ

ನಾ ಅರಳಿದ ಪುಷ್ಪದ ಮೇನಕೆ


ಹೆಜ್ಜೆ-ಗೆಜ್ಜೆಯ ನಾದದ ಕುಣಿತಕೆ

ಕೆದಕಿದೆ ನಿನ್ನ, ಹೃದಯದ ಮೊರೆತಕೆ


ಮೋಡದಿ ಬಂದರೂ ಸುರಿಯದ ಮಳೆ

ಹನಿಯಲಿ ಎಂದೇ ಕಾದಿದೆ ಈ ಇಳೆ


ಹಸಿರು ಬಸಿರಿನ ಆಸೆಯು ಎನಗಿದೆ

ಬಿಸಿಯ ಉಸಿರಿನ ಹನಿಯು ಬೇಕಿದೆ


ಸುಮ್ಮನೆ ಬಂದು ಹೋಗದ ಭೃಂಗ

ಹೀರಿಯೇ ಬಿಡು ಮಕರಂದ ಸಂಗ


ನಮ್ಮಯ ಮಿಲನದಿ ಸೃಷ್ಟಿಯೇ ಅಡಗಿದೆ

ಸೃಷ್ಟಿಯೇ ನಮ್ಮನ್ನು ಮಿಲನಕೆ ಕಳಿಸಿದೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance