ಅಪರಿಚಿತ
ಅಪರಿಚಿತ
ಹೊರಟಿದ್ದಳು ಅವಳು
ಪಾರ್ಕ್ ನಲ್ಲಿ,
ಸುತ್ತಲೂ ಹಚ್ಚ ಹಸಿರು
ಅವಳು ಧರಿಸಿದ್ದಳು ಪಚ್ಚೆ ಧಿರಿಸು...
ಕಿವಿಯಲ್ಲಿ ಲೋಲಾಕು
ಕೈಯಲ್ಲಿ ಜಂಭದ ಚೀಲ
ಕಾಲಲ್ಲಿ ಉದ್ದದ ಚಪ್ಪಲಿ
ಹಾಕಿದ್ದಳು ಪ್ಯಾಂಟು ,ಟೀ ಶರ್ಟು.....
ಅವಳನ್ನು ಹಿಂಬಾಲಿಸಿದರು
ಅವರು
ಗೊತ್ತಿಲ್ಲ ಅವರು ಅವಳಿಗೆ
ಯಾರೋ ಅಪರಿಚಿತರು....
ಓಡಿದಳು ಓಡಿದಳು
ಓಡಿ ಸುಸ್ತಾದಳು
ಆಸರೆ ಹುಡುಕುತ್ತಿದ್ದಳು
ಬಂದ ನೋಡಿ ಅಲ್ಲೊಬ್ಬ ಅಪರಿಚಿತ...
ಅಪರಿಚಿತರನ್ನು ತಡೆದ
ತಪ್ಪು ಮಾಡಿದ್ದಕ್ಕೆ ಬಡೆದ
ಅವಳನ್ನು ಕಾಪಾಡಿದ
ಅವಳಿಗೆ ಧೈರ್ಯ ತುಂಬಿದ...
