STORYMIRROR

Arjun Maurya

Classics Inspirational Thriller

4  

Arjun Maurya

Classics Inspirational Thriller

ಕನ್ನಡ ವರ್ಣಮಾಲೆ ಪದ

ಕನ್ನಡ ವರ್ಣಮಾಲೆ ಪದ

1 min
315

ಕನ್ನಡ ವರ್ಣಮಾಲೆ ಪದವ

ಹಾಡುತ ಕುಣಿಯೋಣ ಬನ್ನಿ II


ಅವರಿವರೇನೇ ಹೇಳಲಿ

ಆತ್ಮವಿಶ್ವಾಸ ಕುಂದದಿರಲಿ

ಇರಲಿ ಶುದ್ಧಮಾರ್ಗವು ನಿನಗೆ

ಈಸಲು ಸಿದ್ಧನಿರಬೇಕು

ಉದರದ ನೆನಪಿನ ಜೊತೆಗೆ

ಊರಿನ ಅರಿವಿರಬೇಕು

ಋಣಾತ್ಮಕ ತೆಗೆದಿಡಬೇಕು

ಎಲ್ಲರೂ ಸಮಾನರಾಗಿದ್ದು

ಏರಿಕೆ ಉನ್ನತ್ತವಿರಬೇಕು

ಐಸರಾಮಿ ಬರದಿರಲಿ ನಿನ್ನ

ಒಲವಿನ ಬದುಕಿನಲೀ

ಓದಿನ ಮಹತ್ವದರಿವಿನ ಜೊತೆಗೆ

ಔನ್ನತ್ಯದ ಚಿಂತನೆಗಳಿರಲಿ

ಅಂತರ್ಯದ ಸೊಗಸಿನ ಜೊತೆಗೆ

ಅಂತಃಕರಣವು ಮೇಳೈಸಲೀ

ಕನ್ನಡತನವ ಬಾಳಲೇಬೇಕು

ಖಡ್ಗಕೆ ಬದಲು ಮೈತ್ರಿಯ ಕೊಟ್ಟು

ಗಣ್ಯತೆ ಗಳಿಸಿರಬೇಕು

ಘನತೆಯ ಬದುಕನು ಕಟ್ಟಲುಬೇಕು

ವಾಙ್ಮಯಿ ಕುಶಲವ ಹೆಚ್ಚುತಲಿ

ಚತುರ ಗಾನವ ಹಾಡಲುಬೇಕು

ಛಲದಲಿ ಸಾಧನೆಗಿಳಿಯಲೇಬೇಕು

ಜನ್ಮದ ಸಮರಸ ತಿಳಿಯುತಾ

ಝರಿಯೋಪಾದಿಯ ಪ್ರಕ್ರಿಯೆಯಲಿ

ಜ್ಞಾನ ದೀಪವ ಹಚ್ಚಲುಬೇಕು

ಟಗರು ನುಗ್ಗುವ ತೆರದಲೀ

ಠರಾವು ಕನ್ನಡಕ್ಕಿರಬೇಕು

ಡಮರುಗ ವಾದ್ಯವ ಮೊಳಗಿಸಿ

ಢಂಬಾಚಾರವ ದೂರ ಮಾಡಿ

ಹಣ ದಾಹವ ಬದಿಗಿರಿಸಿ

ತನುಮನವೆಲ್ಲಾ ನಿರ್ಮಲವಾಗಿ

ಥಟ್ಟನೆ ಕಿರಣವ ಹರಡಿಸಬೇಕು

ದಮನಿತ ಬಾಳಿಗೆ ನೆರವಾಗಿ

ಧನ್ಯತಾ ಭಾವವ ಹೊಂದಲುಬೇಕು

ನಕ್ಷತ್ರವಾಗಿ ಮಿನುಗುತ ನೀನು

ಪದಗಳ ಗುಚ್ಛದಿ ಆಡಲು ಬೇಕು

ಫಲಶ್ರುತಿ ಗಳಿಸಲು ಶ್ರಮಪಡುತಾ

ಬದಲಾವಣೆಯ ಗುರಿಯಿರಬೇಕು

ಭವ್ಯ ಭಾರತದ ಕನಸಿನ ಕಡೆಗೆ

ಮನಸುಗಳು ಒಂದಾಗಲೇಬೇಕು

ಯಶಸ್ವಿ ಬದುಕಿನ ಕಡಲಲಿ

ರವಿಕಿರಣದ ರಂಗಿನ ನಡುವೆ

ಲಕ್ಷಣ ಹುಟ್ಟನು ಹಾಕಲೇಬೇಕು

ವರದಾನದ ಭೂದೇವಿಗೆ ನಮ್ಮನು

ಶತಸಿದ್ಧರಾಗಿ ಅರ್ಪಿಸಬೇಕು

ಷಟ್ಸ್ಥಲ ಕರ್ನಾಟಕ ಸಿದ್ಧಾಂತದಿ

ಸರ್ವರೂ ಸಮಾನವಾಗಿರಬೇಕು

ಹದುಳದೀ ಬಾಳುತಲೆಲ್ಲರೂ

ಹಳದಿ ಕೆಂಪಿನ ಪತಾಕೆಯನ್ನು


ವಿಶ್ವದೆತ್ತರಕೆ ಹಾರಿಸಬೇಕು II


Rate this content
Log in

Similar kannada poem from Classics