STORYMIRROR

Arjun Maurya

Classics Inspirational Thriller

4  

Arjun Maurya

Classics Inspirational Thriller

ಮಾರನೆ ದಿನದ ಬೆಳಿಗ್ಗೆ..

ಮಾರನೆ ದಿನದ ಬೆಳಿಗ್ಗೆ..

1 min
221

ನೆನ್ನೆ ರಾತ್ರಿ ಘಟನೆಗಳೊಳಗೆ ಬಂಧಿಯಾಗಿ

ಚಿಂತೆಗಳ‌ ಸಾಗರದೊಳಗಡೆ ಸತ್ತು ಬಿದ್ದಿದ್ದೆ I


ಬದುಕಿನ ಸಂತೆಯೂ ಎಬ್ಬಿಸಲಾಗಲಿಲ್ಲ

ದೇವರ ಸುಪ್ರಭಾತವೂ ಎಬ್ಬಿಸಲಿಲ್ಲ I


ಜಡ ಶರೀರವನ್ನೆಬ್ಬಿಸಲು ಎಷ್ಟು ಹೋರಾಟ

ಮೈಕು, ಬುಕ್ಕು, ಹೇಳಿಕೆ, ಉಪದೇಶವೆಷ್ಟು? I


ಬಂದವರೆಷ್ಟು ಹೋದವರೆಷ್ಟು ಲೆಕ್ಕಗಳಿಲ್ಲ

ಎಬ್ಬಿಸಲಾರದೆ ವಾಪಾಸು ಹೋದವರೇ..I


ಕಡಿಮೆ ಪಕ್ಷ ನಡೆಯಲೂ ಮಾಡಿದ ಪ್ರಯತ್ನ

ಬದುಕ ಅರಳಿಸಲು ಏನೇನೋ ಯತ್ನಗಳು I


ಆದರೆ ಮೂಡಣದರಮನೆಯ ಬೆಳಕಿನ ಕಿರಣ

ಮಂಜಿನೊಡಲಲಿ ಮಿಂದ ಹಸಿರಿನ‌ ಲೋಕದಲಿ I


ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಇಂಚರಗಳು

ಸತ್ತಿರಬಹುದಾದ ನನ್ನನ್ನು ಮತ್ತೆ ಬದುಕಿಸಿದವು I



Rate this content
Log in

Similar kannada poem from Classics