ದ್ವಂದ್ವ
ದ್ವಂದ್ವ
ಬಸ್ಸಿನ ಕಿಟಕಿ ಬದಿಯ
ಸೀಟಿನಲಿ ಕುಳಿತ
ಅವಳ..
ತಡೆಯಲಾರದೆ ಕೇಳಿದೆ
"ಎಕ್ಸ್ ಕ್ಯೂಸ್ ಮಿ"...
.....
ಕಣ್ಣೀರೊರೆಸಿಕೊಂಡು
ತಿರುಗಿದಳು..
ನನ್ನಕಡೆ...I
"ಸ್ಸಾರಿ..ಎನಿ ಪ್ರಾಬ್ಲಮ್?"
ಎಂದೆ..ಸ್ವಲ್ಪ ಧೈರ್ಯದಲಿ..
ಇಲ್ಲವೆಂದು ತಲೆಯಾಡಿಸಿ
ಹೊರನೋಡಿದಳು..I
ಮತ್ತೆ ಮಾತನಾಡಿಸೋದ..
ಬೇಡವೆಂದೇ ಸುಮ್ಮನಾದೆ..
ಬಸ್ಸು ಸಾಗುತ್ತಿತ್ತು
ಎಲ್ಲವ ಹಿಂದಕೆ ಹಾಕಿ..
ಅವಳ ದುಃಖ
ಹೊರತುಪಡಿಸಿ..II
ನಾನೋ
ತಿಣುಕುವ ಸ್ವಭಾವಿ..
ಏನಾದರೂ ಸಹಾಯ?
ಕೇಳಿದೆ..I
ತಿರುಗಿದಳು..
ಅಸಹನೆ ಬಂದಿರಬೇಕೇನೊ
"ಥ್ಯಾಂಕ್ಸ್" ಅನ್ನೊ
ಅವಳ ಮಾತು
"ಮುಚ್ಕೊಂಡು ಕೂತ್ಕೊಳ್ಳೊ"
ಅನ್ನೋ ಹಾಗಿತ್ತು..II
ನಾನೂ ಹಾಗೇ ಕುಳಿತೆ..
ಕಗ್ಗತ್ತಲ ಪಯಣದಾದಿಯಲಿ
ವಾಲಾಡುತ್ತಾ ಬಸ್ಸು
ಹೆಡ್ ಲೈಟ್ ತೋರಿದ
ರಸ್ತೆಯಲಿ ಸಾಗುತ್ತಿತ್ತು..
***
ಬಸ್ಸಿನಿಂದಿಳಿದ ನಾನು
ತಲೆ ಎತ್ತಿ ನೋಡದೆಯೂ
ಬಂದೆ..
ಕಾಲೇಜಿನ ಪ್ರವೇಶಾತಿ
ಬ್ಯುಸಿ ಬೇರೆ..
ರೂಮಿನಿಂದ ತಡಬಡನೇ
ಹೋದವನೇ..
ಪ್ರಿನ್ಸಿಪಾಲ್ ರ ಚೇರ್ ನಲ್ಲಿ
ಕುಕ್ಕರಿಸಿದೆ.
ಸಹಿಗಾಗಿ ಬರುತ್ತಿದ್ದ
ಹೊಸ ಮುಖಗಳು..
"ಎಕ್ಸ್ ಕ್ಯೂಸ್ ಮೀ ಸರ್"
ಅವಳ ದನಿಗೆ
ತಲೆಎತ್ತಿದೆ..
ಅವಳು..!?
ಬಸ್ಸು..ಕಿಟಕಿ ಸೀಟು
ದುಃಖ..
ರಾತ್ರಿ ಪಯಣ..
ಇಬ್ಬರಿಗೂ ಆಶ್ಚರ್ಯ..
ಸ್ವಲ್ಪ ಹೊತ್ತು ಮೌನ..
ಸಹಿ ಹಾಕಿಕೊಟ್ಟೆ
ಬೇರೇನೂ ಕೇಳದೆ..II
