ಸಖೀ...
ಸಖೀ...
ತವಕದ ದುಂಬಿಯಂತೆ
ಮಾಡಿದೆಯೇಕೆ ನನ್ನ ಸಖೀ
ಹೇಳಿಬಿಡು ಈ ನಗುವೇಕೆ
ಅರಳುವ ಮಲ್ಲಿಗೆಯಂದದಿ
ಹೇಗೆ ವ್ಯಾಖ್ಯಾನ ನೀಡಲಿ
ನಿನ್ನ ನಗುವಾ ಗೂಢಾರ್ಥಕೆ
ಆ ಕ್ಷಣದ ಆಕರ್ಷಣೆಯೇ
ಪ್ರೀತಿ ಎನ್ನಲೇ ಈ ಕಾರ್ಯಕೆ
ತಿಳಿನೀರ ಮನದ ಕೊಳದಿ
ಇಳಿದ ಹಂಸದ ತೆರದಿ
ಅಲೆಗಳೇಳಿಸಿದ ನೋಟ
ಪ್ರಶಾಂತವಾಗದು ದಿಟ
ನನ್ನ ಕಣ್ಣ ಸೂರ್ಯಕಾಂತಿ
ನೀನಿದ್ದೆಡೆ ಕಡೆ ಚಲಿಸಲು
ಕಲ್ಪಿಸಿಕೊಳಲೇನೇನೋ
ಏಕೆ ಬಂದೆ ಕನಲಿಸಲು
ಮನವು ನಿನ್ನ ನಗೆಗೆ ಸೋತು
ನನ್ನೆದೆಯ ಮಿಡಿತ ಹೆಚ್ಚಿದೆ
ಸದಾ ನೀನು ನನ್ನೊಡಲನ್ನು
ಬೆಳಗಿ ಬೆಳಕಾಗು ಎಂದಿದೆ
ಭೃಂಗವು ಬೆನ್ನೇರಿದಂತೆ
ಅರಳುವಿಕೆಯ ಮರುಳಿಗೆ
ಹೃದಯ ತಂತಿ ಮೀಟಲು
ಹೊಸತನವೇ ಮಿಡಿದಿದೆ

