STORYMIRROR

Vijaya Bharathi.A.S.

Inspirational Thriller Others

4  

Vijaya Bharathi.A.S.

Inspirational Thriller Others

ದೇಶ ರಕ್ಷಕರೇ

ದೇಶ ರಕ್ಷಕರೇ

1 min
407

ಕೊರೆವ ಹಿಮಗೆಡ್ಡೆಗಳು

ಮೊರೆವ ಕುಳಿರ್ಗಾಳಿ

ಇರಿವ ಕೆಟ್ಟ ಚಳಿ ಸಹಿಸಿ

ಪೊರೆವ ದೇಶರಕ್ಷಕರೆ

         ನಿಮಗೊಂದು ನಮನ

ತೊರೆದು ಮನೆ ಮಂದಿಯ

ಮೆರೆಯುತ ದೇಶಭಕ್ತಿ ಯ

ತೊರೆದು ಎಲ್ಲಾ ಸ್ವಾರ್ಥವ

ಪೊರೆವ ದೇಶ ಸೇವಕರೆ

           ನಿಮಗೊಂದು ನಮನ

ನನ್ನೆದೆಂಬುದ ಮರೆಯುತ

ನಮ್ಮದೆಂದು ಅರಿಯುತ

ನಮ್ಮ ಗಡಿಗಳ ಕಾಯುತ

ನಮ್ಮೆಲ್ಲರ ಪೊರೆಯುವ

           ವೀರಯೋಧರಿಗೆ ನಮನ.

ನಿಮ್ಮ ನಿಸ್ವಾರ್ಥ ಸೇವೆ

ನಮಗದೋ ಶ್ರೀರಕ್ಷೆ

ನಿಮ್ಮ ಪ್ರಾಣ ತೊರೆದು

ನಮ್ಮ ಕಾಪಾಡುವ ರಕ್ಷಕರೆ

             ನನದೊಂದು ನಮನ



Rate this content
Log in

Similar kannada poem from Inspirational