ನಿನ್ನ ನೆನಪು
ನಿನ್ನ ನೆನಪು
ಮುಂಗಾರು ಮಳೆ ಬಂದು
ಖುಷಿಯು ಇಮ್ಮಡಿಸಿದೆ
ಹೊಲವೆಲ್ಲ ನೀರಾಗಿ
ಪೈರನ್ನು ಕರುಣಿಸಿದೆ!!
ಬಿಸಿಲ ಶಾಖ ತಂಪಾಗಿಸಿ
ಮೈಮನಕೆ ತಂಪೆರೆದಿದೆ
ಪುಷ್ಪವನದಲ್ಲಿ ಸುಮವರಳಿ
ಸುತ್ತೆಲ್ಲಾ ಘಮಲು ಬೀರಿದೆ!!
ತಂಪಾದ ತಂಗಾಳಿ ಬೀಸಿ
ಮಣ್ಣನ್ನೆಲ್ಲ ತಂಪಾಗಿಸಿದೆ
ಮನಸಿಗೆ ಮುದ ನೀಡಿ
ರಮಣೀಯ ಸೊಗಸು ತಂದಿದೆ!!
ಎಲ್ಲೆಲ್ಲೂ ಹೆಜ್ಜೆ ಇಟ್ಟರೂ
ನಿನ್ನದೆ ನೆನಪುಗಳ ಸಾಲು
ಉದ್ಯಾನವನದ ಆ ಪೀಠ
ನಿನ್ನ ನೆನಪು ತರುವ ತಾಣ!!
✍️ ಪುಷ್ಪ ಪ್ರಸಾದ್

