ನಿಗೂಢ
ನಿಗೂಢ
ಮೋಡದ ಮರೆಯೊಳಗೆ
ಏನಿಹುದು ?ಏನಿಹುದು?
ಇನ ಶಶಿಯರೆ? ಗ್ರಹ ತಾರೆಗಳೆ?
ಎಟುಕದೆನ್ನಯ ಕಲ್ಪನೆಗೆ
ಮೋಡದ ಮರೆಯಲಿ
ನೀರಗೆಡ್ಡೆಗಳಿಹವೆ?
ಮಿಂಚಿನ ಟಿಸಿಲುಗಳಿಹವೆ?
ತಿಳಿಯೆ ನಾನದರ ಒಡಲ
ಹರಡಿದ ಅರಳೆಯ ಹಿಂದೆ
ಏನಿಹುದು?ಏನಿಹುದು,?
ಹೀಲಿಯಂ?ಇಂಗಾಲಗಳೋ?
ಗೋಚರಿಸದೆನ್ನಯ ಬುದ್ಧಿಗೆ
ನೀಲಾಗಾಸದ ಹಿಂದೆ
ಕ್ಷೀರ ಸಾಗರವಿಹುದೆ.?,
ಶೇಷಶಾಯಿ ಇಹನೆ?
ಅರಿವಾಗದೆನ್ನ ಹೃದಯಕ್ಕೆ
ಮೋಡದ ಮರೆಯಲಿ
ಇರಲಿ ನಿಗೂಢಗಳು
ಚಲಿಸುವ ಮೋಡಗಳ
ನೋಡುವುದೇ ಚಂದ
