STORYMIRROR

Kavya Poojary

Inspirational Others

2  

Kavya Poojary

Inspirational Others

ನಗುವ ಆಸೆ

ನಗುವ ಆಸೆ

1 min
237

ಮೋಡಗಳ ಮರೆಯಲ್ಲಿ 

ನಗುವ ಆಸೆ ನನಗೆ 

ಕೋಟಿ ಕೋಟಿ ಚುಕ್ಕಿಗಳನ್ನು 

ನಗಿಸುವ ಆಸೆ ನನಗೆ 

ಕರಿ ಮೋಡದ ಛಾಯೆಯ ಕಳೆದು 

ಬೆಳ್ಮುಗಿಲ ಬಾಗಿಲ ತೆರೆದು 

ನಕ್ಕು ನಗುವ ಆಸೆ 

ಹಕ್ಕಿಯಂತೆ ಹಾರಿ 

ಬಾನ ಎಲ್ಲೆಯ ಸೇರಿ 

ನನ್ನ ನಾ ಮರೆಯುವ ಆಸೆ 

ಗಂಧರ್ವರನೊಮ್ಮೆ....

ಕಿಂಕರರನೊಮ್ಮೆ....

ಭೇಟಿಯಾಗುವ ಆಸೆ 

ಬಾನಲ್ಲಿ ತೇಲಾಡಿ 

ಮರೆಯಾಗುವ 

ಮತ್ತೆ ಇತ್ತ ಬರದಂತೆ 

ಕಣ್ಮರೆಯಾಗುವ ಆಸೆ ....


Rate this content
Log in

Similar kannada poem from Inspirational