ಮೊದಲ ಸಂಬಳ
ಮೊದಲ ಸಂಬಳ


ನೆನಪು ಭಾವನೆಗಳೊಂದಿಗಿನ
ಸಂಘರ್ಷ ಚಿತ್ತಾಕರ್ಷಕವಾಗಿವೆ...
ಇದು ನಿರಂತರ.. ಅವಿರತ..
ಕಾಡುವ ನೆನಪುಗಳಲಿ..
ಸಿಹಿ ಕಹಿ ಎಂಬ ಭೇದಗಳು
ಬಾಲ್ಯದ ಆಟದಿ ಆರಂಭ
ಬದುಕಿನ ಕೊನೆಯಲೂ ಮನೋಹರ
ರಂಗು ರಂಗಿನ ಕನಸಲಿ
ಮೊದಲ ಕನಸು ನನಸಾದ ಸಂಭ್ರಮ
ಕಷ್ಟಪಟ್ಟ ಶ್ರಮ ಸಾರ್ಥಕ ಭಾವ..
ಮೊದಲ ಸಂಬಳ ಕೈ ಸೇರಿದ ಖುಷಿ
ಪದೇ ಪದೇ ಎಣಿಸಿ ಜೇಬಿಗೆ ಸೇರಿಸೋ ತವಕ
ಅಲ್ಪ ಹಣದಲಿ ಏನೇನು ಕೊಳ್ಳಬಹುದು
ಎಂಬ ಎಣಿಕೆ.. ಎಲ್ಲವೂ ಸಾಧ್ಯವಿರದೆ ನಿರಾಸೆ..!
ಹೇಳಲಾಗದ ಭಾವ..
ಖುಷಿ ಬೇಸರ ಒಂದು ರೀತಿಯ ಹೆಮ್ಮೆ
ಅರಿಯಲಾಗದ ಸಮ್ಮಿಶ್ರ ಸಾರ..!