ಮನದ ನೋವು
ಮನದ ನೋವು
ಮನದ ನೋವಿಗೆ ಮದ್ದಿಲ್ಲ
ಆಗಾಗ ಕಾಡುವ ನೆನಪುಗಳೇ
ಇದಕ್ಕೆ ನೇರ ಹೊಣೆಗಾರರು
ಮನದ ನೋವಿಗೆ ಮದ್ದಿಲ್ಲ
ಹರಿವ ನದಿಯಂತೆ ಸಾಗುತ್ತಲೇ ಇವೆ
ಹಳೆ ನೆನಪುಗಳ ಕೊಳೆ ಎದೆಯೊಳಗಿನ್ನು ಇದೆ
ಮನದ ನೋವಿಗೆ ಮದ್ದಿಲ್ಲ
ಮೋಸದ ಜೇಡರ ಬಲೆಗೆ
ಸಿಕ್ಕಿದ ಹುಳದಂತೆ ಮನ ಒದ್ದಾಡುತ್ತಿದೆ
ಮನದ ನೋವಿಗೆ ನಿಜ ಮದ್ದಿಲ್ಲ..!
ಹಳೆ ಕೆಟ್ಟ ನೆನಪುಗಳಿಗೆ ಸಾವಿಲ್ಲ
ಕಣ್ಣೆದುರು ಬರುತ್ತವೆ ಬೇಡವೆಂದರು.
