ಮೌನ
ಮೌನ
ತುಸು ವಿರಮಿಸು ಓ ಮೌನವೇ
ಮಾತಿನ ನಡುವಿನಲೂ ಯಾಕೆ
ನುಸುಳಿ ಬರುವೆ..?
ಕಾರಣವಿಲ್ಲದೆ ಕಾಡುವೆ ಯಾಕೀಗೆ
ನಿನ್ನ ಆಗಮನ ನನ್ನ ಕಂಗೆಡಿಸಿದೆ
ಕೇಳುವ ಪ್ರಶ್ನೆಗೆ ಉತ್ತರ ನೀಡಲಾಗದೆ
ಇಲ್ಲದ ಉತ್ತರಕ್ಕೆ ಪ್ರಶ್ನಿಸಲಾಗದೆ
ಸೋಲುತಿರುವೆ ಪ್ರತಿಕ್ಷಣ ನಾನಿಲ್ಲಿ
ನಿನ್ನ ಕಾರಣ..!
ಮಾತನಾಡು ಓ ಮೌನವೇ
ನಿನ್ನೊಳಗಿನ ಭಾವದ ಅರ್ಥವೇನು?
ನಿನ್ನ ರಹಸ್ಯಗಳ ಗಂಟನ್ನೊಮ್ಮೆ ಬಿಚ್ಚಿ
ಹಗುರವಾಗು.. ನನ್ನ ಮನಸಿನ
ಭಾರವನ್ನೂ ಇಳಿಸು..
