ಸ್ವಾತಂತ್ರ್ಯದ ಕನಸು
ಸ್ವಾತಂತ್ರ್ಯದ ಕನಸು
ಹೆಣ್ಣೆಂದು ಜರಿಯುವ
ನಾಲಗೆ ನುಡಿಯಲಿ
ಹೆಣ್ಣಿಗೆ ಸ್ವಾತಂತ್ರ್ಯ ದೊರಕಿದೆಯಾ ಎಂದು!?
ಹೆಣ್ಣು ಚಂಚಲೆಯೆಂದು ಬಿಂಬಿಸುವ
ಪತಿಯೆಂಬ ಭೂಪ ಹೇಳಲಿ
ಹೆಣ್ಣು ಎಷ್ಟು ಸ್ವತಂತ್ರಳೆಂದು?
ಹೆಣ್ಣು ಆಳಾಗಲು ಅರ್ಹಳೆಂದೇ
ಘೋಷಿಸುವ ಯುವಕರು ಹೇಳಲಿ
ಹೆಣ್ಣಿಗೆ ಸ್ವಾತಂತ್ರ್ಯ ಎಷ್ಟಿದೆಯೆಂದು?
ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು
ಬೊಬ್ಬೆಯಿಡುವ ಸಮಾಜ ಹೇಳಲಿ
ಹೆಣ್ಣಿಗೆ ಸ್ವಾತಂತ್ರ್ಯ ಎಲ್ಲಿದೆಯೆಂದು?.