STORYMIRROR

Ramamurthy Somanahalli

Romance Others

2  

Ramamurthy Somanahalli

Romance Others

ಕಣ್ಣೀರೆಂದು ಕಡೆಗಣಿಸದಿರು....

ಕಣ್ಣೀರೆಂದು ಕಡೆಗಣಿಸದಿರು....

1 min
158

ಕಣ್ಣೀರೆಂದು ಕಡೆಗಣಿಸದಿರು ಇನಿಯ

ಕಣ್ಣೀರಲ್ಲ ಮನದ ಭಾವವಿದು ಗೆಳೆಯ 11೧11


ಹೃದಯದಿ ಬರೆದ ಪ್ರೀತಿಯ ಕವನ

ಹಾಡಿಹೆನಾ ಬಾನಲಿ ಬಾನಾಡಿಯಾಗಿ

ನಿನದೇ ನೆನಪು ಕಾಡಿಹುದೆನ್ನ

ಎಲ್ಲಿಹೆ ನೀ ಬಳಿ ಸಾರದೆ ಎನ್ನ .... 11 ಕಣ್ಣೀರೆಂದು 11


ಸಂಜೆ ತಂಗಾಳಿ ಸುಡುತಿರೆ ಎನ್ನ

ನಿನ್ನೊಲವ ಸಾಗರದಿ ಮುಳುಗಿಹೆನಾ

ನಡೆಸು ನೀ ಕೈಹಿಡಿದು ಜೀವನ ನೌಕೆ

ತೇಲಿ ಸಾಗುವ ನಾವು ಜೊತೆಯಲಿ ಪ್ರೀತಿಯ ದಡಕೆ.....11ಕಣ್ಣೀರೆಂದು11


ನಲುಗದಿರು ನೋಯದಿರು

ಬಳಿ ನಾನಿರುವೆ ಗೆಳತಿ

ಸಾಗಲೀ ನಮ್ಮೀ ಜೀವನ ಪಯಣ

ಹಾಡುತ ನಿತ್ಯ ಪ್ರೇಮದಾ ಕವನ ... 11ಕಣ್ಣೀರೆಂದು 11

- ರಾಮಮೂರ್ತಿ ಸೋಮನಹಳ್ಳಿ

 ನಿವೃತ್ತ ಕಾರ್ಮಿಕ ನಿರೀಕ್ಷಕ ಮಂಗಳೂರು


Rate this content
Log in

Similar kannada poem from Romance