Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shiqran Sharfuddin

Tragedy

5.0  

Shiqran Sharfuddin

Tragedy

ಕಂದ, ನಿನಗೆ ವ್ಯಥಿತ ವಿದಾಯ!!!

ಕಂದ, ನಿನಗೆ ವ್ಯಥಿತ ವಿದಾಯ!!!

1 min
202


[ಸೆಪ್ಟೆಂಬರ್ ೨, ೨೦೧೫ರಂದು ಸಿರಿಯಾದ ನಿರಾಶ್ರಿತರ ಕೂಸೊಂದು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಹುತಾತ್ಮರಾದ ಘಟನೆಯನ್ನು ನೆನೆದು ಮಾನವೀಯತೆಯ ಸಾವನ್ನು ಖಂಡಿಸುತ್ತ ಬರೆದ ಕಾವ್ಯಸಾಲುಗಳು]


ಕಾಲ ಗಾಲಿಯು ಗಿರಗಿರನೆ ತಿರುಗುತ್ತಿತ್ತು;

ಹಗಲಿರುಳು ಬೀಜ ಮಾತಿನಲ್ಲಿ ಉರುಳುತಿತ್ತು;

ಸಿರಿಯಾದ ಬಾಲ ಶಯ್ಯೆಯಲ್ಲಿ

ಬೆಳಗಿದ ಆ ಪುಟ್ಟ ಹಣತೆ,

ಮಲಗಿತು ಚಿರ ನಿದ್ರೆ

ಟರ್ಕಿಯ ತೀರದಲ್ಲಿ


ಕಲ್ಲು ಹೃದಯಿಗಳ ನಾಟಕೀಯ

ರಾಜಕೀಯಕ್ಕೆ ಬೆದರಿ,

ಅರ್ಪಿಸಿದನು 'ಮೆಡಿಟರೇನಿಯನ್'ಗೆ

ತನ್ನ ಮುಗ್ಧ ಪ್ರಾಣವ;

ಚಿರ ನಿದ್ರೆಗೆ ತಾನು ಮಲಗಿ

ಜಗಕೆ ಎಬ್ಬಿಸಲು

ಯತ್ನಿಸಿತು, ಕೂಸು!


ಕೆಂಪು ಅಂಗಿ-ಕಪ್ಪು ಚಡ್ಡಿಯನ್ನು ಕಂಡು

ಜಗವೆಲ್ಲ ಎದೆಯೊಡೆದು ಹರಿಸಿದರು

ಕಣ್ಣೀರಿನ ಝರಿಯನು!

ಆದರೆ ಏನು?

ಬಿಡಲಿಲ್ಲ ಕ್ರೂರಿಗಳು

ತಮ್ಮ 'ಕನಸಿನ ರಾಜ್ಯ' ಕಟ್ಟುವ

ಹಠವನ್ನು!


"ದಫನಗೊಳಿಸಿ ನನ್ನನ್ನೂ ನನ್ನ

ಮಗುವಿನೊಂದಿಗೆ..."

ಆ ಗೋಳೂ ಕೇಳಲಿಲ್ಲ

ಕಾಲಗಾಲಿಯಲಿ ಸಿಲುಕಿದವರು;

ಎಂದಿನಂತೆ ಕಾಲಗಾಲಿಯೂ ಗಿರಗಿರನೆ

ತಿರುಗುತ್ತಿತ್ತು;

ಹಗಲಿರುಳು ಬೀಜ ಮಾತಿನಲಿ

ಉರುಳುತ್ತಿತ್ತು;


ಗೃಹಸ್ಥಿಕೆಯಿಲ್ಲದ ಈ ಲೋಕದಿಂದ

ಪುಟ್ಟ 'ಆಯ್ಲಾನ್ ಕುರ್ದಿ'ಗೆ ತೆತ್ತಿಸಿ ತನ್ನದಾಗಿಸಿದ

ದಿವ್ಯಲೋಕವೇ

'ನಿನಗೆ ಕೋಟಿ ಕೋಟಿ ವಂದನೆಗಳು!'


ಮುಗ್ಧನಿಗೆ ಎತ್ತಲೂ ಇಲ್ಲಿ ಸುಖವಿಲ್ಲ, ಮಗು...

ಸ್ವರ್ಗದ ಪುಷ್ಪ ಗರ್ಭವೇ ಆಗಲಿ

ನಿನ್ನ ಭವ್ಯ ಭವನ;

ಅಲ್ಲೇ ಸದಾ ಸುಖವಾಗಿರು, ಕಂದ!

ಈ ನೊಂದ ಆಶಯ ನಿನ್ನ ಕೊಲೆಪಾತಕರದ್ದಲ್ಲ...

ನಿನ್ನ ನಿದ್ರೆಗೆ ಎದ್ದ, ನಿನ್ನ ಅಣ್ಣನ

ವ್ಯಥಿತ ಎರಡು ಕಣ್ಣುಗಳ

ಕಣ್ಣೀರಿನ ಸಾಲುಗಳು...!


Rate this content
Log in

Similar kannada poem from Tragedy