STORYMIRROR

Surabhi Latha

Romance Classics Others

4  

Surabhi Latha

Romance Classics Others

ಕಾಡದಿರು ಹೀಗೆ

ಕಾಡದಿರು ಹೀಗೆ

1 min
339

ಸುತ್ತ ಮುತ್ತಲು ಹತ್ತಾರು ಹೆಣ್ಣುಗಳಿರಲು 

ನಿನಗೇಕೆ ನನ್ನ ಮೇಲೆ ಈ ಪರಿ ಮೋಹವು 

ಕರೆ ಕರೆದು ಒಲವು ತೋರಿರಲು 

ನನ್ನೇ ಏಕೆ ಕಾಡುವೆ ಹಗಲಿರುಳು ? 


ನಾ ಸಿಗುವೆ ಎಂಬ ನಂಬಿಕೆ ನಿನಗೇಕಿನ್ನು 

 ಮೊಹದ ಬಲೆಗೆ ಬೀಳೆನು ನಾನು 

ನಿರಾಸೆಗೆ ಗುರಿಯಾಗದಿರು ನೀನು 

ಸಮಯ ವ್ಯರ್ಥ ವಾಗಿಸದಿರು ಇನ್ನು 


ಹೂಗಳು ಹಲವಾರು ತೋಟದಲ್ಲಿ 

ಒಂದಕ್ಕೊಂದು ಸುಂದರವು ಅಂದದಲ್ಲಿ 

ಕೊಳೆಯದಿರು ಕರಗುವ ಕನಸಿನಲಿ 

ಆದರಿಸು ಒಲಿದು ಬಂದ ಹೆಣ್ಣಲ್ಲಿ  


 


 


.


Rate this content
Log in

Similar kannada poem from Romance