ಹಸಿರಾಗಿಸು ಬಾಳು
ಹಸಿರಾಗಿಸು ಬಾಳು
ಏಳು ಎದ್ದೇಳು ಹಸಿರಾಗಿಸು ಬಾಳು
ಗೋಳು ಅದು ಹಾಳು ಸರಿಯಲ್ಲವೇ ನೀ ಹೇಳು
ನನ್ನ ಕೈಕೊಟ್ಟರು ಕೈಬಿಟ್ಟರು ಅವಳೇ ನನ್ನವಳು
ದೂರ ಹೋದರು ಅವಳ ನೆನಪೇ ಹಗಲಿರುಳು
ಪ್ರೀತಿಯೆಂಬ ಮಗು ಮನದಲ್ಲಿ ಅರಳು
ಆ ಕುಸುಮ ಮಾಡಿತು ನನ್ನ ಮರಳು
ಉಳಿಸಲಾದ ಪ್ರೀತಿ ನನ್ನ ಬಿಟ್ಟು ತೆರಳು
ಇನ್ನೂ ಬಿಟ್ಟಿಲ್ಲ ಅವಳ ಪ್ರೇಮದ ನೆರಳು
ಪ್ರೀತಿಯು ಮಾಯವಾಯಿತು
ಪ್ರೇಮವು ಮರೆಯಾಯಿತು
ಮನವು ಸೋಲಿಗೆ ಮಣಿಯಿತು
ಜೀವವು ನೋವಿಗೆ ತೆರೆ ಎಳೆಯಿತು

