Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

PRASANNA KUMAR

Romance Classics Others

4  

PRASANNA KUMAR

Romance Classics Others

ಏಕಾಂಗಿ ನೀನಲ್ಲ

ಏಕಾಂಗಿ ನೀನಲ್ಲ

1 min
316


ಮೌನವೇಕೆ ಚೆಲುವೇ

ನಿನ್ನೊಲವೆ ನನಗೆ ಚೇತನ ||


ಜೀವನದ ಹಾದಿಯಲ್ಲಿ ನಾನಿನ್ನ ಜೊತೆಯಾದೆ

ಬಯಸದೆ ನೀ ಬಂದೆ ಸಂಗಾತಿಯಾದೆ

ಬಣ್ಣದ ಚಿತ್ತಾರ ಬದುಕೆಂದು ಅರಿಯೋಣ

ಒಲವಿನ ಲೋಕದ ಆಂತರ್ಯ ಅರಿಯೋಣ

 ಬಣ್ಣಕೆ ಸೋಲದೆ ಒಂದಾಗಿ ನಡೆಯೋಣ  ||


ನೀ ಕಂಡ ಕನಸುಗಳೆಷ್ಟೋ ನಾನರಿಯೆ ನನ್ನಾಣೆ

ನಾ ಕಂಡ ಕನಸುಗಳನ್ನು ನೀ ತಿಳಿಯೆ ಓ ಜಾಣೆ

ಮನಬಿಚ್ಚಿ ನೀನು ಆಡು ಸವಿ ಮಾತೊಂದ

ಮನಸಾರೆ ಕೇಳಿ ಹೊಂದುವೆನು ಮೋದ

ನಂಬಿಕೆ ಅರಳಲು ಸೌಗಂಧ ಜೀವನ ||


ಈ ನಿನ್ನ ಮೌನದಲ್ಲಿ ಏನರ್ಥ ಅಡಗಿದೆಯೋ

ಒಗಟಾಗಿ ಇಡಬೇಡ ಹೇಳಿದರೆ ಹಗುರಮನ

ಒಲವಿನ ಬಾಳಿಗೆ ನೀನಿರದೆ ಗೆಲುವಿಲ್ಲ

ಮುರಿ ಮೌನ ಮಾತನಾಡು ಮರೆತೀಗ ಎಲ್ಲ

 ಏತಕೆ ಕಂಬನಿ ಏಕಾಂಗಿ ನೀನಲ್ಲ ||


Rate this content
Log in

Similar kannada poem from Romance