ನಿಲುಕಿದ ನಕ್ಷತ್ರ
ನಿಲುಕಿದ ನಕ್ಷತ್ರ
ನಿಲುಕದ ನಕ್ಷತ್ರ ನೀ ಎಂದು,
ಅಂದುಕೊಂಡಿದ್ದೆ ನಾ..!
ಆದರೆ ಬರುಬರುತ್ತಾ ನೀ ನನ್ನ
ಮನಸಿನೊಳಗೆ ಇಳಿದುಬಿಟ್ಟೆ..!
ಕ್ರಮೇಣ ಹೃದಯದಾಳಕ್ಕೆ ಇಳಿದು,
ಇಂದು ನೀ ನನ್ನ
ಕಣಕಣದಲ್ಲೂ ಆವರಿಸಿಬಿಟ್ಟೆ..!
ಕೈಗೆಟುಕದ ತಾರೆ ನೀ ಎಂದು ಅರಿತು,
ಅಂದು ನಾ ಸುಮ್ಮನೇ ಇದ್ದುಬಿಟ್ಟಿದ್ದರೆ,
ನನ್ನನ್ನು ತಿದ್ದಿ ತೀಡಿ ಹೊಸ
ಮನುಜನನ್ನಾಗಿ ಮಾಡುವ ಸುಂದರ
ಅವಕಾಶವನ್ನ ನೀ ಕಳೆದುಕೊಳ್ಳುತ್ತಿದ್ದೆ..!
ವಿವಾಹವೆಂಬ ಬಂಧನದಿಂದ ನೀ ನನಗೆ
ನಿಲುಕಿದ ನಕ್ಷತ್ರವಾಗಿಬಿಟ್ಟೆ..!
ನನ್ನ ಸಂಗಾತಿಯಾಗಿ ಪಡೆದ ನೀನೇ
ಬಲು ಅದೃಷ್ಟವಂತೆ..!

