ಹೊತ್ತಿಗೇನು ಗೊತ್ತಿದೆ
ಹೊತ್ತಿಗೇನು ಗೊತ್ತಿದೆ
ಮೊಳಕೆಯೊಡೆದಿದೆ ನಿನ್ನ ಮನದಲಿ
ನನಗಾಗಿ ಪ್ರೀತಿಯ ಭಾವ
ಅರಳಿದೆ ನಿನ್ನಯ ಕಣ್ಣುಗಳಲ್ಲಿ
ನನಗಾಗಿ ಜೀವನದ ಪರಿವರ್ತನೆ!!
ನನ್ನಲ್ಲಿ ಮಾತನಾಡಲು ನಿನಗೆಷ್ಟು ಆತುರ
ನಿನ್ನನ್ನು ನೋಡಲು ನನಗೆಷ್ಟು ಕಾತರ
ಮನಸ್ಸುಗಳ ಮಿಲನ
ಬೆರೆತಾಗ ಉಸಿರುಸಿರು
ಸ್ವರ್ಗದಾ ಸುಖವನ್ನು ನಾ ಕಂಡೆ
ನಿನ್ನಯ ಸ್ಪರ್ಶದಿ ನಾ ಮಿಂದೆ!!
ನಮ್ಮ ಸ್ನೇಹ ಜೇನಂತೆ ಮಧುರ
ನಮ್ಮ ಪ್ರೀತಿ ಬೆಳದಿಂಗಳಂತೆ ಸುಂದರ
ಹೊತ್ತಿಗೇನು ಗೊತ್ತಿದೆ ಒಲವ ಸುಮ
ಅರಳಲು ಘಮ ಘಮ
ತುಂಬಿದೆ ಬಾಳಲ್ಲಿ ಹರುಷವ ನೀನು
ಕಾದಿರುವೆ ಸೇರಲು ನಿನ್ನಲ್ಲಿ ನಾನು!!

