STORYMIRROR

Arjun Maurya

Romance Fantasy Inspirational

4  

Arjun Maurya

Romance Fantasy Inspirational

ಹನಿಯಬೇರು

ಹನಿಯಬೇರು

1 min
363

ತೆರೆದ ತುಟಿಯ ದಳಗಳು |

ಅರಳಿ-ಹೊರಳಿಸಿತು ಮನವ || 

ಮುಗ್ಧ-ಸ್ನಿಗ್ಧ ಬಾಲಿಕೆಯ | 

ಸುತ್ತತೊಡಗಿತು ಜೀವ ಬಳ್ಳಿ || 


ನಾಚೀನೀರೇ ನೀರು ನೀನು.. 

ನಿನ್ನೊಡಲ ತುಂಬಾ ಲಜ್ಜೆ || 

ಬಳುಕಿ ಹರಿವ ಒಡಲ ತುಂಬಾ 

ಮುತ್ತುಮದ್ರೆಗಳದೆ ಹೆಜ್ಜೆ || 


ಶಾಖ-ಸುಖದ ಮುತ್ತ ಸ್ಪರ್ಶ 

ಹೂವಿನೆದೆಗೆ ಮುತ್ತಹನಿ || 

ನಿನ್ನ ಎದೆಯ ಹರವು ತುಂಬಾ 

ಸೃಷ್ಠಿಶೀಲ ಜೇನಹನಿ || 


ಭೂಮಿ ಎದೆಯ ಗರ್ಭದಲ್ಲಿ 

ಗಗನ ಚುಕ್ಕಿ ಹನಿಯ ಬೇರು || 

ಉಕ್ಕಿದೆದೆಯ ಹಾಲ ಸತ್ವ 

ಸೃಷ್ಠಿ ಲಯದ ಗಾನ ತೇರು || 


ಪಯಣದಲಿ ನಾನು-ನೀನು 

ನೀನು ಬೇರು - ನಾನು ನೀರು || 

ನಿನ್ನೊಲವ ನಿರೀಕ್ಷೆಯೊಳು 

ಕಾರ‍್ಯ ಕಾರಣ ನಾನು-ನೀನು || 


ನಿನ್ನ ನಗುವ ಜಗದ ಒಳಗೆ 

ಬೆಳ್ಳಕ್ಕಿ ಪಂಕ್ತಿಗಳು || 

ಫಲದ ಸುಖದ ಕಂಪಿನೊಳಗೆ 

ಹೊಂಗನಸಿನ ಜನ್ಮಗಳು || 


ನನ್ನ ಮುತ್ತು - ನಿನ್ನ ಪ್ರಾಣ 

ಜಗತಿಗೊಂದು ಹೊಸತು ಪಯಣ || 

ನುಡಿಸಿ-ಬಡಿಸಿ ರಾಗದೊಳಗೆ 

ಜಗದ ನಿಯಮ ಇದುವೇ ಕಾಣ || 



Rate this content
Log in

Similar kannada poem from Romance