STORYMIRROR

Lakumikanda Mukunda

Tragedy

2  

Lakumikanda Mukunda

Tragedy

ಗಜಲ್..

ಗಜಲ್..

1 min
140

ಎಂದೋ ಸತ್ತ ನನ್ನಾತ್ಮಕ್ಕೆ ಇಂದೇತಕೇ ಕಂಬನಿಯೋ ಪುಣ್ಯಾತ್ಮ..

ಇದ್ದಾಗ ಒಲವುಣಿಸದೆ,ಆತ್ಮಬಲ ಹರಿದಿರುವೆಯೋ ಪುಣ್ಯಾತ್ಮ..


ಯಾರದ್ದೊ ಕಂಬನಿಯೊರೆಸಲು ನಿನ್ನವರ ಹೆಣಗಳ ನೀನೇ ಹೊತ್ತಿರುವೆ..

ನಿನ್ನ ಜರಿದಾಗ ದೂರ ಸರಿದು ನಿಜವರಿಯದೆ ಮೌನತಾಳಿರುವೆ ಪುಣ್ಯಾತ್ಮ..


ಹುಟ್ಟಂಬಲಿ ಮರೆತು ಸಿರಿಯ ಮತ್ತಲ್ಲಿ ನೀನು ಮಾತಾಡುತಿರುವೆ

ಮನದ ಕೆರೆಯ ನೀರು ಬತ್ತಿ ಬರಿ ಬಿರುಕುಗಳಷ್ಟೆ ಉಳಿದಿವೆ ಪುಣ್ಯಾತ್ಮ... 


ನಾನು ಪಾಪಿ,ಕೋಪಿ ಕಿಡಿ ನೇತ್ರ,ಸದಾ ಸಿಡಿಗುಂಡನಾಡುತಿರುವೆ

ಮೌನವ ಕೆಣಕದಿರು ಸ್ಪೋಟಿಸದಿರಲಿ ತಣಿಯಲಿಡುವೆ ಪುಣ್ಯಾತ್ಮ..


ನಿನ್ನೋಡನಾಡಿ ಹೊಗಳಿದವರೇ ನಾಳೆ ಬೊಗಳುವರು ಕಚ್ಚುವರು ನಿನ್ನನೇ

ಮೆಟ್ಟಿ ನಿಲ್ಲುವ ಛಾತಿಯ ಮಾಯೆ ಲಕುಮಿ ಕರುಣಿಸಲೆಮಗೆ ಪುಣ್ಯಾತ್ಮ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy