ಗಿಡಗಳಿಲ್ಲದ ಜಗ
ಗಿಡಗಳಿಲ್ಲದ ಜಗ
ಬರ...ಬರಡು
ಗಿಡಗಳಿಲ್ಲದ ಜಗ
ಬರಡು..l
ಬರಡಾದ ನೆಲದೊಳು ಹಸಿದ
ಹೆಣವಾದರು ಒಂದೊಮ್ಮೆ
ನಡುನೀರಿನೊಳು ಕೊಚ್ಚಿಕೊಂಡಿದ್ದ ಜನ ll
ಸಾವಿನ ಸರದಿಯಲ್ಲಿ ನಿಂತ
ಖಗಮೃಗಗಳು
ಕಣ್ಣೀರಾಕಬೇಕೆಂದರೂ..
ಬತ್ತಿಹೋದ ಕಣ್ಣಿನೊಡಲು ll
ಕತ್ತಲಿಗಿಳಿದ ಗಿಳಿಳಿಂಚರ
ಒಣನದಿಯಲ್ಲಿ
ಚಿತ್ರವಿಚಿತ್ರ ಕಲ್ಲುಗಳ
ನಿಸ್ತೇಜತೆ..ll
ಬತ್ತಿಹೋದ ಜೀವಜಲ
ಎಲುಬುಗಳ ಕಾಳಸಂತೆ
ಉಸುರಿನಮಿಸುಕಾಟ ll
ತಿನ್ನಬಹುದೇ ಮಣ್ಣ?
ಕುಡಿಯಬಹುದೇ ಮೂತ್ರವ?
ಬದುಕಲೇನಾದರೂ ಆಗಬಹುದೇ?
ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರದಲೀ
ಹರಿದಾಡುವ ಮೂಳೆಗಳು..ll
ರಕ್ತವೂ ಇಲ್ಲ..ಮಾಂಸವೂ ಇಲ್ಲ
ಕಾದು ಕುಳಿತಿರೋ ರಣಹದ್ದುಗಳು..
ಬರ...ಬರಡು
ಗಿಡಗಳಿಲ್ಲದ ಜಗ
ಬರಡು ll
