STORYMIRROR

Prabhakar Tamragouri

Tragedy Classics Inspirational

4  

Prabhakar Tamragouri

Tragedy Classics Inspirational

ಎಂಕನೋ ಆತನ ಗೂಡಂಗಡಿಯೋ.....?

ಎಂಕನೋ ಆತನ ಗೂಡಂಗಡಿಯೋ.....?

1 min
366


ಬಸ್ ಸ್ಟ್ಯಾಂಡಿನ ಎದುರುಗಡೆ

ರಸ್ತೆ ತಿರುವಿನಲ್ಲಿ

ನಾಲ್ಕು ರಸ್ತೆ ಕೂಡುವ

ಗಂಜೀಗದ್ದೆ ಸರ್ಕಲ್ಲಿನ ಪಕ್ಕ

ತೆಂಗಿನ ಗರಿಯಿಂದ ಮಾಡಿದ

ಮಡ್ಲಿನಿಂದ ಹೊದೆಸಿದ

ಪುಟ್ಟದಾದ ಎಂಕನ ಗೂಡಂಗಡಿ !

ಪಕ್ಕದಲ್ಲಿ ಚಿಕ್ಕದಾದ ದಣಪೆ

ದಣಪೆ ಸುತ್ತ ಹಬ್ಬಿರುವ

ತೊಂಡೆ ಬಳ್ಳಿ , ಹುಲ್ಲು

ಅನತಿ ದೂರದಲ್ಲಿ ಶೆಟ್ಟಿ ಚಹದಂಗಡಿ


ಗೂಡಂಗಡಿಯ ಒಳಗೆ 

ಒಂದು ಸಣ್ಣ ಅಂಡರ್ ವೇರ್ ಧರಿಸಿ

ಎಲೆಕಟ್ಟು ಸೇರಿಸಿಡುವ ಎಂಕ

ಬೆಳಗಿನಿಂದ ರಾತ್ರಿ ತನಕ

ಆ ಗೂಡಂಗಡಿಗೆ ನೂರಾರು ಗಿರಾಕಿ

ಪಕ್ಕದಲ್ಲೊಂದು ಸೈಕಲ್

ನಿತ್ಯ ನೂರಾರು ರೂಪಾಯಿ

ಸಂಪಾದಿಸುವ ಎಂಕ

ಸುಟ್ಟ ಸುಣ್ಣ ಸಿಗುವುದು

ಆ ಪುಟ್ಟ ಗೂಡಂಗಡಿಯಲ್ಲಿ ಮಾತ್ರ !

ಆ ರಸ್ತೆಯಲ್ಲಿ ಹೋಗಿ ಬರುವವರಿಗೆ

ಆ ಗೂಡಂಗಡಿ ಒಂದು ಜಂಕ್ಷನ್ ! 


ಈಗ ಕಾಲ ಬದಲಾಗಿದೆ ಊರು ಬೆಳೆದಿದೆ

ಎಂಕನ ಗೂಡಂಗಡಿ ಬದಲಾಗಿ

ಅಲ್ಲೊಂದು ಆರ್ಸಿಸಿ ಬಿಲ್ಡಿಂಗ್ ಎದ್ದಿದೆ

ಅತ್ತಿತ್ತ ತಿರುಗುವಾಗ

ಆ ಗೂಡಂಗಡಿ ಇದ್ದ ಜಾಗವನ್ನೇ ನೋಡುತ್ತೇನೆ

ಈಗ ಎಂಕನೂ ಇಲ್ಲ ,

ಆತನ ಗೂಡಂಗಡಿಯೂ ಇಲ್ಲ

ಆದರೆ , ನೆನಪಿಸಿಕೊಳ್ಳಲು

ಗಂಜೀಗದ್ದೆ ಮಾತ್ರ ತನ್ನ

ಅಸ್ತಿತ್ವವನ್ನು ಉಳಿಸಿಕೊಂಡಿದೆ .!




Rate this content
Log in

Similar kannada poem from Tragedy