ಬರೆಯದ ಕವಿತೆ
ಬರೆಯದ ಕವಿತೆ


ಬರೆಯದ ನೂರು ಕವಿತೆಗಳು
ಮನದೊಳಗೆ..
ಬರೆಯುವೆನೆಂದರೆ ಎತ್ತಲೋ ಹೊರಟಿವೆ
ಪದಗಳ ಮೆರವಣಿಗೆ..
ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಆದರೆ ಶಬ್ದಗಳ ಕೊರತೆ..
ಈ ಮೌನ ಮರೆಯಲಾಗದ ಕವನ
ಮಾತು ಬರೆದು ಮರೆತು ಬಿಡುವ ಸಂಭ್ರಮ
ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು
ತುಸು ಕೋಪ ಬೇಸರ ಮನದಲಿ
ಲೇಖನಿಯೂ ವಹಿಸಿದೆ ಮೌನವನು..
ಉತ್ತರವೆ ಸಿಗದಂಥ ಪ್ರಶ್ನೆಗಳು ಹಲವಾರು
ಪ್ರತಿದಿನವು ಕೈಬೀಸಿ ಕರೆಯುತಿಹ ಭಾವಗಳು
ಬರೆಯಲಾಗದೆ ಕುಳಿತು ಚಡಪಡಿಸುತ್ತಿರುವೆ
ಭಾವನೆಯ ಪಯಣದಲಿ ಮೌನ ವಹಿಸಿ..