ಅಸಮಾಧಾನ
ಅಸಮಾಧಾನ
ಅಸಮಾಧಾನದ ಕಿಚ್ಚು
ಎದೆಯೊಳಗೆ ಕುದಿಯುತಿತ್ತು
ಅವನು ಅದನು ಯಾರಿಗೂ ಹೇಳಲಿಲ್ಲ
ಕಣ್ಣಲ್ಲೆ ಮಾತಾನಾಡಿದ ಚುಚ್ಚಿ
ಬದಿಗಿರಿಸಿದ ನನ್ನೆಲ್ಲ ಭಾವಗಳ
ಅವನು ಮನಸಲಿರುವುದ ಹೇಳಲಿಲ್ಲ
ಹಂಗಿಸಿದ ನನ್ನ ನ್ಯೂನ್ಯತೆಗಳ
ಅನುರಾಗವಿರದ ಕಲ್ಲು ಮನದಿ
ಅವನು ಇದ್ದ ಜಾಗದಲ್ಲಿ ಬೆಳಕಿಲ್ಲ
ಹಣದ ಅಮಲಿನಲಿ
ಹೆಣ್ಣಿನ ಬಗೆಗಿಲ್ಲ ಕನಿಕರ
ಅವನ ಮನದಲ್ಲಿ ಅಣುಗಿಲ್ಲ
ಅವನ ಎದೆಯಲ್ಲಿ ನನಗಾಗಿ ಪ್ರೇಮ ಹುಟ್ಟಲಿಲ್ಲ
